ಕೊಡಗು : ಸೋಮವಾರಪೇಟೆ ಬಂದ್ ‘ಗೆ ಬೆಂಬಲ
ಕೊಡ್ಲಿ ಪೇಟೆ : ಕೊಡ್ಲಿಪೇಟೆಯಲ್ಲಿ ಅಂಗಡಿ ಮುಂಗಟ್ಟು ಹಾಗೂ ಕೆಲವು ಶಾಲೆಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದವು. ಆದರೆ ಬ್ಯಾಂಕ್ ತೆರೆದಿದ್ದರಿಂದ ರೈತ ಸಂಘ ಕಾಫಿ ಬೆಳೆಗಾರರ ಸಂಘ, ಚೇಂಬರ್ ಆಫ್ ಕಾಮರ್ಸ್ ಮತ್ತು ವರ್ತಕರು ಸೇರಿದಂತೆ ಮುಚ್ಚಿಸಿದರು.ಹಲವಾರು ವರ್ಷಗಳಿಂದ ರೈತರು ಉಳಿಮೆ ಮಾಡಿ ಜೀವನಕ್ಕೆ ಆಧಾರವಾಗಿರುವಂತ ಕೃಷಿ ಭೂಮಿಯನ್ನು ಸಿ ಅಂಡ್ ಡಿ ಹಾಗೂ ಸೆಕ್ಷನ್ 4 &5 ಅಡಿಯಲ್ಲಿ ವ್ಯವಸಾಯಕ್ಕೆ ಯೋಗ್ಯವಲ್ಲವೆಂದು ನಿರ್ಧರಿಸಿ ರೈತರಿಂದ ಭೂಮಿಯನ್ನು ಕಸಿದುಕೊಳ್ಳುವ ರೈತರನ್ನು ಒಕ್ಕಲೇಬ್ಬಿಸುವ ಅವಜ್ಞಾನಿಕ ವರದಿಯ ಮೂಲಕ ಹಾಗೂ ಅರಣ್ಯ ಇಲಾಖೆಗೆ ಸೇರ್ಪಡೆಗೆ ವಿರೋಧಿಸಿ ರೈತರು ನಾಳೆ ಹಮ್ಮಿಕೊಂಡಿರುವ ಸೋಮವಾರಪೇಟೆ ತಾಲೂಕು ಬಂದ್ ಗೆ ಕೊಡ್ಲಿಪೇಟೆಯ ಅಂಗಡಿ ಮಾಲೀಕರು ಹಾಗೂ ಶಾಲಾ ಕಾಲೇಜುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದವು. ಆದರೆ ಬ್ಯಾಂಕ್ ತೆರೆದಿದ್ದರಿಂದ ರೈತ ಸಂಘ ಕಾಫಿ ಬೆಳೆಗಾರರ ಸಂಘ, ಚೇಂಬರ್ ಆಫ್ ಕಾಮರ್ಸ್ ಮತ್ತು ವರ್ತಕರು ಸೇರಿದಂತೆ ಮುಚ್ಚಿಸಿದರು. ಈ ಸಂದರ್ಬದಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಯತೀಶ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಕೆ ಆರ್ ಚಂದ್ರಶೇಖರ್, ಗ್ರಾಮ ಪಂಚಾಯತಿ ಸದಸ್ಯರಾದ ವಹಾಬ್ , ರೈತ ಸಂಘದ ಅಧ್ಯಕ್ಷರಾದ ಭಗವಾನ್ ,ಕರವೇ ಅಧ್ಯಕ್ಷರಾದ ರಾಜೇಶ್ ಮತ್ತು ಇತರರು ಉಪಸ್ಥಿತರಿದ್ದರು
ವರದಿಗಾರರು
ಫ್ರೆಡ್ಡಿ PC