ಸುದ್ದಿ

ಕೊಡಗು: ವಿದ್ಯಾರ್ಥಿ ಬದುಕಿನಲ್ಲಿ ಎನು ಆಗಬೇಕು ಎಂಬ ಗುರಿ ಇರಬೇಕು. ಡಾ. ಎಂ. ಬಿ.ಬೋರಲಿಂಗಯ್ಯ ಐಪಿಎಸ್

ಕೊಡ್ಲಿಪೇಟೆ:ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಪದವಿ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ಪ್ರೌಡ ಶಾಲಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಚಿಂತೆಯಿಂದ ಚಿಂತೆನೆಗೆ ಆರೋಗ್ಯಕರ ಮನಸ್ಸುಗಳಿಗೆ ಎಂಬ ಕಾರ್ಯಕ್ರಮವನ್ನೂ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಎಚ್. ಎಸ್. ಚಂದ್ರಮೌಳಿ ,ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ, ಹಾಗೂ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟನೆ ಮಾಡಲಾಯಿತು ನಂತರ ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ ಅವರು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗ್ರಾಮೀಣಾ ಪ್ರದೇಶದಲ್ಲಿ ವ್ಯಾಸಂಗ ಮಾಡಿ ಎಂಬಿಬಿಎಸ್ ಮತ್ತು ಐಪಿಎಸ್ ಪದವಿ ಪಡೆದುಕೊಂಡಿದ್ದೇನೆ. ಅದೇ ರೀತಿ ವಿದ್ಯಾರ್ಥಿ ಬದುಕಿನಲ್ಲಿ ಏನು ಆಗಬೇಕು ಎಂಬ ಗುರಿ ಇರಬೇಕು. ಆ ನಿಟ್ಟಿನಲ್ಲಿ ಆಲೋಚನೆ ಮಾಡಿ ಮುಂದುವರಿದರೆ ಯಶಸ್ಸು ಸಾಧ್ಯ. ಕೆಲವು ಎರುಪೇರುಗಳಾದರು ಹಿಂಜರಿಯದೇ ಮಾಡಬೇಕು. ಶೇ.100ರಷ್ಟು ಗುರಿಯತ್ತ ಗಮನಹರಿಸಿದರೆ ಸಾಧನೆ ಮಾಡಬಹುದು. ದಿನದಲ್ಲಿ 16 ಗಂಟೆ ಓದಬೇಕೆಂದಿಲ್ಲ. ಪ್ರತಿದಿನ ಓದುವುದನ್ನು ರೂಡಿಸಿಕೊಳ್ಳಬೇಕೆಂದರು.

ಮೊಬೈಲ್ ಹಾಗೂ ಸಾಮಾಜಿಕ ಜಾಲ ತಾಣದ ಅತೀಯಾದ ಬಳಕೆ ಮತ್ತು ಮಾದಕ ದ್ರವ್ಯ ವ್ಯಸನವು ನಮ್ಮ ಮುಂದಿನ ಗುರಿಯೆಡೆಗೆ ಸಾಗಲು ತೊಡಕಾಗುತ್ತದೆ. ಯಾವುದೇ ಕ್ಷೇತ್ರವಾಗಲಿ, ಸಾಧನೆ ಮಾಡಬೇಕಾದರೆ ಶಿಕ್ಷಣದ ಕಡೆ ಮುಖ್ಯವಾಗಿ ಗಮನಹರಿಸಬೇಕೆಂದು ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಿದರು.

ನಂತರ ಮಾತನಾಡಿದ ಎ ಎಸ್ ಪೊನ್ನಣ್ಣ ಅಂಗೈಯಲ್ಲಿ ಪ್ರಪಂಚವನ್ನೇ ಸೃಷ್ಟಿ ಮಾಡುತ್ತಿದೆ. ಇದರಲ್ಲಿ ಬರುವಂತಹ ವಿಷಯಗಳ ಬಗ್ಗೆ ಸತ್ಯಶೋಧನೆಯನ್ನು ಹುಡುಕುವ ಪ್ರಯತ್ನವಾಗಬೇಕು

ಇವತ್ತು ಸಮಾಜಿಕ ಜಾಲತಾಣದಲ್ಲಿ ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಿಸಿ ಇತಿಹಾಸ ತಿರುಚಲಾಗುತ್ತಿದೆ. ಅಂದಿನ ಹೋರಾಟದ ಸಮಯದಲ್ಲಿ ಬಚ್ಚಿಟ್ಟುಕೊಂಡು ಬ್ರಿಟಿಷರಿಗೆ ಹಿಂಬಾಗಿಲ ಮೂಲಕ ಸಹಕರಿಸಿದವರನ್ನು ದೇಶ ಭಕ್ತರೆಂದು ಬಿಂಬಿಸಲಾಗುತ್ತಿದೆ. ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ದೇಶದ್ರೋಹಿಗಳಾಗಿ ಚಿತ್ರಿಕರಿಸುವ ಪ್ರಯತ್ನವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ
ಕೆ.ರಾಮರಾಜನ್ ಮಾತನಾಡಿ,ನಿಮ್ಮ ತಪ್ಪನ್ನು ನೀವೇ ಸರಿಪಡಿಸಿಕೊಳ್ಳಿ “ವಿದ್ಯಾರ್ಥಿಗಳು ತನ್ನಲ್ಲಿರುವ ತಪ್ಪುಗಳನ್ನು ತಾನೆ ಹುಡುಕಿಕೊಂಡು ಅದನ್ನು ಸರಿಪಡಿಸಿಕೊಂಡರೆ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ತಾನು ಆಯ್ಕೆ ಮಾಡಿಕೊ ಳ್ಳುವ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿವಹಿಸಿ ಮುನ್ನುಗ್ಗಬೇಕು,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಸಂಸ್ಥೆಯ ಅಧ್ಯಕ್ಷ ಹಿರಿಯ ವಕೀಲರಾದ ಎಚ್.ಎಸ್.ಚಂದ್ರಮೌಳಿ, ಜಿಲ್ಲೆಯ ಗಡಿಭಾಗದಲ್ಲಿರುವ ಗ್ರಾಮೀಣಾ ಭಾಗದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಸಾಧನೆ ಮಾಡಿರುವಂತಹ ಗಣ್ಯರನ್ನು ಕರೆಸಿ ಅವರ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಆಕರ್ಷಿತರಾಗಲೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆಯು ವಿವಿಧ ವಲಯಗಳ ಹಲವು ಸಾಧಕರನ್ನು ಆಹ್ವಾನಿಸಿ ಉಪನ್ಯಾಸ ಮಾಡಿಸಲಾಗಿದೆ ಎಂದು ತಿಳಿಸಿದರು. ಜೀವನದಲ್ಲಿ ಸಂತ್ರಪ್ತಿ ಇರಬೇಕೆಂದರೆ
ವಿದ್ಯಾರ್ಥಿ ಬದುಕನ್ನು ಗಂಭೀರವಾಗಿ ಪರಿಗಣಿಸಬೇಕು. ಸಾಧಕರುಗಳ ಆಶಯಗಳನ್ನು ಆಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ವಿದ್ಯಾಸಂಸ್ಥೆ ಅಧ್ಯಕ್ಷ ಮತ್ತು ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಅಧ್ಯಕ್ಷತೆ ವಹಿಸಿದರು.ವೇದಿಕೆಯಲ್ಲಿ ಅರುಣಾ ಚಂದ್ರಮೌಳಿ, ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಪರಮೇಶ್‌, ಖಜಾಂಚಿ ಡಾ.ಉದಯ್‌ಕುಮಾ‌ರ್, ನಿರ್ದೇಶಕ ರಾದ ಯತೀಶ್,ಶಿವಪ್ರಸಾದ್, ಶಂಬುಲಿಂಗಪ್ಪ ಪ್ರಾಂಶುಪಾಲ ಎಂ.ಆರ್.ನಿರಂಜನ್, ಪ್ರಮುಖರಾದ ಕೆ.ಪಿ.ಚಂದ್ರಕಲಾ, ಕುಶಾಲನಗರ ಉಪ ವಿಭಾಗದ ಡಿವೈಎಸ್ಪಿ ಗಂಗಾಧರ್,ಶನಿವಾರಸಂತೆ ವೃತ್ತ ನಿರೀಕ್ಷಕರಾದ ಪ್ರೀತಮ್ ಡಿ ಶ್ರೇಯಕರ್ ಪ್ರಮುಖರಾದ ಕೆ.ಪಿ.ಚಂದ್ರಕಲಾ, ಕೆ.ಎಂ. ಲೊಕೇಶ್, ವಿ.ಪಿ.ಶಶಿಧರ್, ಮಂಜುನಾಥ್ ಗುಂಡೂರಾವ್ ಹಾಗೂ ಶಾಲಾ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

ವರದಿ: ಫ್ರೆಡ್ಡಿ ಪಿಸಿ

Johnson J

Johnson Reporter Kodagu

Related Articles

Leave a Reply

Your email address will not be published. Required fields are marked *

Back to top button