ಕೊಡಗು: ಕೆಲ ಕೊಡ್ಲಿ ರಸ್ತೆಯಲ್ಲಿ ಚೆಕ್ ಪೋಸ್ಟ್ ಆರಂಭಿಸಲು ಆಗ್ರಹ
ಶನಿವಾರಸಂತೆ: ಕೊಡ್ಲಿಪೇಟೆ-ಹಾಸನಕ್ಕೆ ತೆರಳುವ ಕೆಲಕೊಡ್ಲಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ತಪಾಸಣೆ ನಡೆಸುವ ಸಲುವಾಗಿ ಶೀಘ್ರ ಚೆಕ್ ಪೋಸ್ಟ್ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆದರೆ, ಕೊಡ್ಲಿಪೇಟೆಯಿಂದ ಹಾಸನಕ್ಕೆ ಕೆಲಕೊಡ್ಲಿ ರಸ್ತೆ ಮೂಲಕ ಮಗ್ಗೆ-ಶೆಟ್ಟಳ್ಳಿ ಮಾರ್ಗವಾಗಿ ತಲುಪಬಹುದಾಗಿದೆ. ಈ ರಸ್ತೆಯಲ್ಲಿ ಹಾಸನದ ತನಕ ಯಾವುದೆ ತಪಾಸಣಾ ಕೇಂದ್ರ ಇರುವುದಿಲ್ಲ,ಈ ರಸ್ತೆಯಲ್ಲಿ ಹಾಸನ ತಲುಪಲು ಕೊಡ್ಲಿಪೇಟೆಯಿಂದ 40 ಕಿ.ಮೀ.ದೂರ ಮಾತ್ರ ಆಗಿರುತ್ತದೆ. ರಸ್ತೆ ಉತ್ತಮವಾಗಿದ್ದು ಉದ್ಘಾಟನಾ ಭಾಗ್ಯ ಕಾಣದ ಸುಂದರ ಸೇತುವೆಯೂ ಇದೆ. ಶಾಂತಪುರ ಹಾಗೂ ನಿಲುವಾಗಿಲು ಕಟ್ಟುನಿಟ್ಟಾಗಿ ತಪಾಸಣೆ ನಡೆಸುವುದರಿಂದ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತದೆ ಲೋಕಸಭೆ ಚುನಾವಣೆ ಪ್ರಯುಕ್ತ ಅಕ್ರಮ ಚಟುವಟಿಕೆಗಳ ಮೇಲೆ ನಿಗಾವಹಿಸಲು ಈ ಭಾಗದಲ್ಲಿ ಕೊಡಗು ಮತ್ತು ಹಾಸನ ಜಿಲ್ಲೆಯ ಅಧಿಕಾರಿಗಳು ಯಾವುದೇ ಚೆಕ್ ಪೋಸ್ಟ್ ತೆರೆದಿರುವುದಿಲ್ಲ. ಹಾಗಾಗಿ ಈ ರಸ್ತೆಯಲ್ಲಿ ಸರಾಗವಾಗಿ ಅಕ್ರಮ ಮದ್ಯ ಹಾಗೂ ಹಣ ರವಾನೆಗೆ ಯಾವುದೇ ನಿಯಂತ್ರಣ ಇಲ್ಲವಾಗಿದೆ.
ಸಂಬಂಧಪಟ್ಟ ಇಲಾಖೆಗಳು, ಅಧಿಕಾರಿಗಳು ಕೊಡ್ಲಿಪೇಟೆ-ಹಾಸನಕ್ಕೆ ತೆರಳುವ ಕೆಲಕೊಡ್ಲಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ತಪಾಸಣೆ ನಡೆಸುವ ಸಲುವಾಗಿ ಶೀಘ್ರ ಚೆಕ್ ಪೋಸ್ಟ್ ತೆರೆದರೆ ಉತ್ತಮ ಎಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಜಿಲ್ಲೆಯ ಗಡಿಭಾಗ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕೊಡಗು-ಹಾಸನ ಅಂತರ್ಜಿಲ್ಲಾ ಮಾರ್ಗವಾದ ಶಾಂತಪುರ ಮತ್ತು ನಿಲುವಾಗಿಲು ಗ್ರಾಮಗಳಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು ಸಿಬ್ಬಂದಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸುತ್ತಿದ್ದಾರೆ.
ತಾಲೂಕು ವರದಿಗಾರರು
ಫ್ರೆಡ್ಡಿ ಪಿಸಿ