ಕನ್ನಡತಿ ಅಕ್ಕ ಅನುಗೆ ಮದುವೆನಾ!! ವೈರಲ್ ವಿಡಿಯೋ ಹಿಂದಿನ ಸತ್ಯವೇನು??
ಕನ್ನಡತಿ ಅಕ್ಕ ಅನು ಸಾಮಾಜಿಕ ಜಾಲತಾಣ ಬಳುಸುವವರಿಗೆ ಚಿರಪರಿಚಿತ ಹೆಸರು. ಈಕೆಯ ಕಾರ್ಯ ಇಂದಿನ ಯುವ ಜನತೆಗೆ ಮಾದರಿ. ಹೀಗಾಗಿ ಕನ್ನಡತಿ ಅಕ್ಕ ಅನು ಎಂದರೆ ಕನ್ನಡಿಗರಿಗೆ ಗೌರವದ ಭಾವ. ಇವರ ಬಗ್ಗೆ ಯಾವುದೇ ವಿಚಾರಗಳಿದ್ದರೂ ತಿಳಿದುಕೊಳ್ಳುವ ಕುತೂಹಲ ಅನೇಕರಿಗಿದೆ.
ಹೀಗಾಗಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅಕ್ಕ ಅನು ವಿಡಿಯೋ ನೋಡಿ ಅವರ ಅಭಿಮಾನಿಗಳು ಹಾಗೂ ಫಾಲೋವರ್ಸ್‌ಗಳು ಗೊಂದಲಕ್ಕೀಡಾಗಿದ್ದಾರೆ.
ಸಾಮಾನ್ಯವಾಗಿ ಫ್ಯಾಂಟ್, ಶರ್ಟ್ ಧರಿಸಿ ಸರ್ಕಾರಿ ಶಾಲೆಗಳ ಗೋಡೆಗಳಿಗೆ ಬಣ್ಣ ಬಳಿಯುವ ಕಾರ್ಯದಲ್ಲೇ ಕಾಣಿಸಿಕೊಳ್ಳುವ ಅಕ್ಕ ಅನು ಇತ್ತೀಚಿಗೆ ಸೀರೆಯುಟ್ಟು, ತಲೆ ತುಂಬಾ ಹೂವು ಮುಡಿದುಕೊಂಡಿರುವ ಫೋಟೋ ಹಾಗೂ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದರಿಂದ ಕನ್ನಡತಿ ಅಕ್ಕ ಅನುಗೆ ದಿಢೀರ್ ಮದುವೆಯಾಯ್ತಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.
ಟೀಮ್ ಅಕ್ಕ ಅನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಾಗಿದ್ದು, ತಲೆ ಮೇಲೆ ನೀರು ಹಾಕುವ, ಬಳಿಕ ಸೀರೆಯುಟ್ಟು ಹೂವು ಮುಡಿಸುವ ವಿಡಿಯೋ ನೋಡಿದ ಅವರ ಫಾಲೋವರ್ಸ್‌ಗಳು ಏನಿದು ಕಾರ್ಯಕ್ರಮ ಮದುವೆಯಾ ಶಾಸ್ತ್ರವೇ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಅಕ್ಕ ಅನು ಊರ ಜಾತ್ರೆಯಲ್ಲಿ ದೇವರಿಗೆ ದೀರ್ಘ ದಂಡ ನಮಸ್ಕಾರ ಹರಕೆ ತೀರಿಸಿದ್ದಾರೆ.
ಇದನ್ನು ದೀರ್ಘದಂಡ ನಮಸ್ಕಾರ, ಅಥವಾ ಧೀಡ ನಮಸ್ಕಾರ ಎಂದು ಸಹ ಕರೆಯುತ್ತಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಜಾತ್ರೆಗಳು ಇರುವ ಸಂದರ್ಭದಲ್ಲಿ ಹರಕೆ ಹೊತ್ತುಕೊಂಡವರು ಮನೆಯಿಂದ ದೇವಾಲಯದವರೆಗೂ ಒದ್ದೆ ಬಟ್ಟೆಯಲ್ಲಿ ದಾರಿಯುದ್ದಕ್ಕೂ ಸಾಷ್ಟಾಂಗ ನಮಸ್ಕಾರ ಮಾಡುತ್ತ ಹೋಗುತ್ತಾರೆ. ಈ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಬೇಡಿಕೊಳ್ಳುತ್ತಾರೆ. ಹಾಗೂ ಕೆಲವರು ಇಷ್ಟಾರ್ಥಗಳು ನೆರವೇರಿರುವುದಕ್ಕೆ ಸೇವೆ ಸಲ್ಲಿಸುತ್ತಾರೆ.
ಸದ್ಯ ಕನ್ನಡತಿ ಅಕ್ಕ ಅನುಗೆ ದಿಢೀರ್ ಮದುವೆಯಾಯ್ತಾ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಈ ವಿಡಿಯೋದಲ್ಲಿ ಅಕ್ಕ ಅನು ಬೇಸರದ ಮುಖ ನೋಡಿದ ಫಾಲೋವರ್ಸ್ ಏನು ಸಮಸ್ಯೆಯಾಗಿದೆ. ನಿಮ್ಮೊಂದಿಗೆ ನಾವಿದ್ದೇವೆ. ಯಾಕೆ ಬೇಸರದಲ್ಲಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಸದ್ಯ ಅಕ್ಕ ಅನು ಈ ವಿಡಿಯೋ ವೈರಲ್ ಆಗುತ್ತಿದ್ದು, ಸದಾ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳುವ ನಿಮ್ಮ ಇಷ್ಟಾರ್ಥ ಈಡೇರಲಿ ಎಂದು ಹಲವರು ಹಾರೈಸಿದ್ದಾರೆ.