ಇಸ್ರೇಲ್ ಮಹಿಳಾ ಸೈನಿಕರಿಗೆ ಲೈಂ**ಗಿಕ ಕಿರುಕುಳ – ವಿಡಿಯೋ ಬಿಡುಗಡೆ ಮಾಡಿದ ಹಮಾಸ್
ಜೆರುಸಲೇಂ: ಹಮಾಸ್ ಉಗ್ರರ ವಶ ದಲ್ಲಿರುವ ಇಸ್ರೇಲಿನ ಮಹಿಳಾ ಸೈನಿಕ ರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಇಸ್ರೇಲ್ ಹೇಳಿದೆ. ಅಲ್ಲದೇ ಇವರನ್ನು ದೇಶಕ್ಕೆ ಮರಳಿ ಕರೆತರಲು ಸರಕಾರಕ್ಕೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದೆ.
ಮಹಿಳಾ ಯೋಧರಿಗೆ ಚಿತ್ರಹಿಂಸೆ ನೀಡುತ್ತಿರುವ 3 ನಿಮಿಷದ ವೀಡಿಯೋವನ್ನು ಬಿಡುಗಡೆ ಮಾಡಲಾಗಿದೆ.
7 ಮಹಿಳಾ ಯೋಧರ ಕೈಗಳನ್ನು ಹಿಂದಕ್ಕೆ ಕಟ್ಟಿ, ಗೋಡೆಯ ಕಡೆಗೆ ಮುಖಮಾಡಿ ನಿಲ್ಲಿಸಲಾಗಿದೆ. ಎಲ್ಲರ ಮುಖದಲ್ಲೂ ರಕ್ತದ ಕಲೆಗಳು ಕಾಣುತ್ತಿವೆ.
“ಇಲ್ಲಿ ಮಹಿಳೆಯರು, ಹುಡುಗಿಯರು ಇದ್ದಾರೆ. ಇವರೆಲ್ಲರೂ ಗರ್ಭಿಣಿಯಾಗಬಲ್ಲರು’ ಎಂದು ಒಬ್ಬ ಉಗ್ರ ಹೇಳಿದ್ದಾನೆ. ಮತ್ತೂಬ್ಬ “ನೀನು ತುಂಬಾ ಸುಂದರವಾಗಿದ್ದೀಯಾ’ ಎನ್ನುತ್ತಾನೆ. “ನಿಮ್ಮಿಂದ ನಮ್ಮ ಸೋದರರು ಸತ್ತಿ ದ್ದಾರೆ. ನಿಮ್ಮೆಲ್ಲರನ್ನೂ ನಾವು ಸಾಯಿ ಸುತ್ತೇವೆ’ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಇಸ್ರೇಲ್‌ನ ಪ್ರಕಾರ ಇನ್ನೂ 124 ಮಂದಿ ಹಮಾಸ್‌ನ ಒತ್ತೆಯಲ್ಲಿದ್ದಾರೆ. ಈ ವೀಡಿಯೋವನ್ನು ಉಗ್ರರು ಧರಿಸಿ ರುವ ಬಾಡಿಕ್ಯಾಮ್‌ಗಳಿಂದ ಸಂಗ್ರಹಿಸ ಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.