ಸುದ್ದಿ

ಹಣ ಡಬಲಿಂಗ್ ಮಾಡೋದಾಗಿ ಹೇಳಿ ದಂಪತಿಗೆ ವಂಚನೆ, ಲಂಡನ್ ನಲ್ಲೆ ಕುಳಿತು ಕೃತ್ಯ

ಹಣ ಡಬ್ಲಿಂಗ್​ ಹೆಸರಿನಲ್ಲಿ ಬೆಂಗಳೂರಿನ ಟೆಕ್ಕಿ ದಂಪತಿಗೆ ವಂಚಕರು ವಂಚಿಸಿರುವ ಘಟನೆ ನಡೆದಿದೆ. ಲಂಡನ್ ನಲ್ಲಿ ಕುಳಿತು ಈ ಕೃತ್ಯ ಎಸಗಲಾಗಿದೆ.ಫೋನ್ ಕರೆಯಿಂದ ಬೆಂಗಳೂರಿನ ಟೆಕ್ಕಿ ದಂಪತಿ 2,66,75,791 ರೂ. ಹಣ ಕಳೆದುಕೊಂಡಿರುವಂತಹ ಘಟನೆ ನಡೆದಿದೆ.

ಬಳಿಕ ಪೂರ್ವ ವಿಭಾಗ ಸಿ.ಇ.ಎನ್​ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೇಸ್ ದಾಖಲಿಸಿ ತನಿಖೆ ಮಾಡಿದಾಗ ಹಣದ ವರ್ಗಾವಣೆ ಜಾಲ ಪತ್ತೆ ಆಗಿದೆ. ಸುಮಾರು ಐವತ್ತು ಅಕೌಂಟ್​ಗಳಿಗೆ ಹಣ ಹೋಗಿರುವುದು ಪತ್ತೆಯಾಗಿದ್ದು, ಹಂತ ಹಂತವಾಗಿ ಒಟ್ಟು ಒಂದು ಕೋಟಿ ಐದು ಲಕ್ಷ ರೂ. ಪೊಲೀಸರು ಫ್ರೀಜ್ ಮಾಡಿದ್ದು, ನಂತರ ನ್ಯಾಯಾಲಯದ ಅನುಮತಿ ಪಡೆದು ವಾಪಸ್ಸು ನೀಡಿದ್ದಾರೆ.ದಂಪತಿಗೆ ಮೊದಲಿಗೆ ಕರೆ ಮಾಡಿ ಯುಟ್ಯೂಬ್​ನಲ್ಲಿ ವಿಡಿಯೋ ನೋಡಿ ಸಬ್​ಸ್ಕ್ರೈಬ್​ ಮಾಡಿದರೆ 50 ರೂ. ನೀಡುವುದಾಗಿ ಹೇಳಿದ್ದರು. ವಿಡಿಯೋ ಸಬ್​ಸ್ಕ್ರೈಬ್ ಮಾಡಿದ್ದ ಟೆಕ್ಕಿ ದಂಪತಿಗೆ ಹಣ ನೀಡಿದ್ದರು. ನಂತರ ಟೆಲಿಗ್ರಾಂ ಗ್ರೂಪ್​ಗೆ ಸೇರಿಸಿ ಮಾಡಿ ಹೂಡಿಕೆ ಮಾಡಿದರೆ ಡಬಲ್ ಹಣ ನೀಡುವುದಾಗಿ ದಂಪತಿಗೆ ಆಮಿಷ ಒಡಲಾಗಿದೆ.ಮೊದಲಿಗೆ 2-3 ಲಕ್ಷ ರೂ. ಹೂಡಿಕೆ ಮಾಡಿದ್ದವರಿಗೆ ಲಾಭಾಂಶ ನೀಡಿದ್ರು. ನಂತರ ಹಂತಹಂತವಾಗಿ 2,66,75,791 ರೂ ದಂಪತಿ ಹೂಡಿಕೆ ಮಾಡಿದ್ದಾರೆ.

ಹಣ ವಾಪಸ್ಸು ಪಡೆಯಲು ಮುಂದಾದಾಗ ಬಂದಿಲ್ಲ. ಪ್ರಶ್ನೆ ಮಾಡಿದಾಗ ಮತ್ತೆ ಐವತ್ತು ಲಕ್ಷ ರೂ. ಹೂಡಿಕೆ ಮಾಡಲು ಸೂಚಿಸಲಾಗಿದೆ. ಹೀಗಾಗಿ ಹೆದರಿ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.ಆರೋಪಿ ಲಂಡನ್​​ನಲ್ಲಿ ಕುಳಿತು ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಇದ್ದು, ಉತ್ತರ ಭಾರತದ ಹಲವಾರು ಅಕೌಂಟ್​ಗಳನ್ನು ಬಳಕೆ ಮಾಡಿದ್ದಾರೆ. ಶೇರ್ ಮಾರ್ಕೆಟ್ ಬ್ರೋಕರೇಜ್ ರೀತಿಯ ನಕಲಿ ವೆಬ್​ಸೈಟ್ ರಚನೆ ಮಾಡಿದ್ದಾರೆ. ವೆಬ್​ಸೈಟ್​ನಲ್ಲಿ ನಕಲಿಯಾಗಿ ಹಣ ಹೆಚ್ಚಾಗಿರುವಂತೆ ಬಿಂಬಿಸಿದ್ದಾರೆ.

Naveen Kumar

Managing Editor

Related Articles

Leave a Reply

Your email address will not be published. Required fields are marked *

Back to top button