ಮಂಗಳೂರು :ಸೌತ್ ಕೆನರಾ ಪೆಂಟೆಕೋಸ್ಟಲ್ ಕೇರ್ ಹ್ಯಾಂಡ್ಸ್ ವತಿಯಿಂದ ಸ್ವಚ್ಛತಾ ಅಭಿಯಾನ ಶಿಬಿರ ಮತ್ತು ಸಹಾಯ ಹಸ್ತ
ಕಡಬ : ಸ್ವಚ ಭಾರತ ಅಭಿಯಾನವು ಒಂದು ಬೃಹತ್ ಸಮೂಹ ಚಳುವಳಿ ಆಗಿದೆ. ಇದು 2019 ನೇ ಇಸವಿಯ ಹೊತ್ತಿಗೆ ಭಾರತವನ್ನು ಸ್ವಚ ಭಾರತವನ್ನಾಗಿಸುವ ಗುರಿಹೊಂದಿತು .ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಯಾವಾಗಲು ಸ್ವಚತೆಯ ಬಗ್ಗೆ ಒತ್ತು ನೀಡುತ್ತಿದರು. ಸ್ವಚತೆಯಿಂದ ಜೀವನದಲ್ಲಿ ಅರೋಗ್ಯ ಮತ್ತು ಅಭಿವೃಧಿಯನ್ನು ಹೊಂದಬಹುದು ಎಂದು ನುಡಿಯುತ್ತಿದರು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಾರತ ಸರ್ಕಾರವು 2014 ರ ಅಕ್ಟೋಬರ್ 2 ರಂದು ಸ್ವಚ ಭಾರತ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿತು.ಈ ಧ್ಯೇಯವು ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡಿರುತ್ತದೆ. ನಗರದಲ್ಲಿ ನಗರಾಭಿವೃದ್ಧಿ ಸಚಿವಾಲಯ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಕಾರ್ಯ ಗತಗೊಳಿಸುವ ಹೊಣೆಹೊತ್ತಿದೆ ಇದರ ಭಾಗವಾಗಿ ಸೌತ್ ಕೆನರಾ ಪೆಂಟೆಕೋಸ್ಟಲ್ ಕೇರ್ ಹ್ಯಾಂಡ್ಸ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ತಾಲೂಕು ಆಸ್ಪತ್ರೆಯಲ್ಲಿ ಸ್ವಚ್ಛತಾ ಅಭಿಯಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಮಾರು 20 ಜನ ಸೇರಿ ತಾಲೂಕು ಆಸ್ಪತ್ರೆಯ ವಠಾರ, ಸುತ್ತ ಮುತ್ತ ಸ್ವಚ್ಛತೆ ಮಾಡಿ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದರು.
ಕಾರ್ಯಕ್ರಮದ ನಂತರ ಈ ತಂಡವು ತಾಲೂಕಿನ ಐತ್ತೂರು ಗ್ರಾಮದ ಪಾದೆ ಮಜಲು ನಿವಾಸಿ ದಯಾನಂದ್ ಅವರ ಎಲುಬು ಕ್ಯಾನ್ಸರ್ ನಿಂದ ಬಾದಿತನಾಗಿರುವ ಮಗ ಸ್ವಸ್ತಿಕ್ ನನ್ನು ಸಂದರ್ಶಿಸಿ ಸೌತ್ ಕೆನರಾ ಕೇರ್ ಹ್ಯಾಂಡ್ಸ್ ಮೂಲಕ 10000 ರೂಪಾಯಿ ನಗದು ನೀಡಿ, ಅದೇ ರೀತಿ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದಲ್ಲಿ ಕಿಡ್ನಿ ರೋಗದಿಂದ ಬಾದಿತನಾಗಿರುವ ಕುಟ್ಟಪ್ಪನ್ ಅವರನ್ನು ಭೇಟಿ ಮಾಡಿ ಅರೋಗ್ಯವನ್ನು ವಿಚಾರಿಸಿ ಬ್ಯಾಂಕ್ ಚೆಕ್ ಮೂಲಕ 5000ರೂಪಾಯಿ ನೀಡುವುದರ ಮೂಲಕ ಈ ತಂಡವು ಮಾನವೀಯತೆಯನ್ನು ಮೆರೆದರು.
ಅದು ಮಾತ್ರ ವಲ್ಲದೆ ದುರಂತ ಬೂಮಿ ವಯನಾಡ್ ನಲ್ಲಿ ಎರಡು ಬಾರಿಯೂ ಸಹಾಯ ಹಸ್ತದೊಂದಿಗೆ
2024 ರ ಆಗಸ್ಟ್ 25 ರಿಂದ 31 ಕೇರ್ ಹ್ಯಾಂಡ್ಸ್ ನ ಹೆಸರಿನಲ್ಲಿ ವಯನಾಡಿನ ಚುರಲ್ ಮಾಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ತಂಡ ಶ್ಲಾಘನೀಯ ಸೇವೆಯನ್ನು ಸಲ್ಲಿಸಿತು. ಅದೇ ರೀತಿ ಪೆಂಟೆಕೋಸ್ಟಲ್ ಕೇರ್ ಹ್ಯಾಂಡ್ಸ್ ಹೆಸರಿನಲ್ಲಿ ಸಮಾಜ ಸೇವೆಗಾಗಿ ಪಂಗಡವನ್ನು ಲೆಕ್ಕಿಸದೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದೆ. ಈ ಸೌತ್ ಕೆನರಾ ಪೆಂಟೆಕೋಸ್ಟಲ್ ಕೇರ್‌ಹ್ಯಾಂಡ್ಸ್ ವಯನಾಡಿನ ವಿವಿಧ ಪ್ರದೇಶಗಳಲ್ಲಿ ಸೆಪ್ಟೆಂಬರ್ 23 ರಿಂದ 25 ರವರೆಗೆ ಕಾರ್ಯನಿರ್ವಹಿಸಿತು. ಈ ಎಲ್ಲಾ ಕಾರ್ಯಕ್ರಮದಲ್ಲಿ ಸೌತ್ ಕೆನರಾ ಪೆಂಟೆಕೋಸ್ಟಲ್ ಕೇರ್ ಹ್ಯಾಂಡ್ಸ್ ನ ಅಧ್ಯಕ್ಷರಾದ ರೇವರೆಂಡ್ ಪಾಸ್ಟರ್ ಪ್ರಿನ್ಸ್ ಮಾರ್ಕ್ ಉಪಾಧ್ಯಕ್ಷರಾದ ರಂಜಿತ್ ಪೂವತಿಂಗಲ್ ಕಳೆoಜ, ಕಾರ್ಯದರ್ಶಿ ಸಾಜು ಜೋಸ್ ಖಜಾಂಜಿ ಜಿಬು ಜೋಯ್ ಮತ್ತು ಕೇರ್ ಹ್ಯಾಂಡ್ಸ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.