ಸುದ್ದಿ

ಸರ್ಕಾರಿ ನೌಕರರು ತಮ್ಮ ಆಸ್ತಿಯನ್ನು ಸಾರ್ವಜನಿಕವಾಗಿ ಘೋಷಿಸಬೇಕುಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಕೂಡ ತಮ್ಮ ಆಸ್ತಿ ಘೋಷಿಸಬೇಕು

ಬೆಂಗಳೂರು (ನ್ಯೂಸ್ ಎನ್ ಕನ್ನಡ ) : ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್. ಜೀವನ್
. ಎಲ್ಲಾ ಸರ್ಕಾರಿ ನೌಕರರ ಆಸ್ತಿ ವಿವರಗಳನ್ನು ಸರ್ಕಾರವು ಸಂಗ್ರಹಿಸಿ, ಲೋಕಾಯುಕ್ತಕ್ಕೆ ನೌಕರರ ಆಸ್ತಿ ವಿವರಗಳನ್ನು ಪರಿಶೀಲಿಸಲು ಅವಕಾಶ ಒದಗಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಲೋಕಾಯುಕ್ತರು ಈ ವಿವರವು ಸರ್ಕಾರದ ಸುಪರ್ದಿಯಲ್ಲಿದ್ದು ಮತ್ತು ಅಕ್ರಮ ಆಸ್ತಿ ಗಳಿಸಿದವರ ವಿರುದ್ಧ ತನಿಖಾ ಸಂದರ್ಭದಲ್ಲಿ ಸಂಬಂಧಿಸಿದ ನೌಕರರ ಆಸ್ತಿ ವಿವರ ಪರಿಶೀಲಿಸಲು ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಪರಿಶೀಲಿಸಲು ಅವಕಾಶ ಇರಬೇಕೆಂದು ತಿಳಿಸಿದ್ದರು. ಲೋಕಾಯುಕ್ತರ ಈ ಸಲಹೆಯು ಈ ವಿವರವು ಕೇವಲ ಸರ್ಕಾರಕ್ಕೆ ಮತ್ತು ಲೋಕಾಯುಕ್ತಕ್ಕೆ ಮಾತ್ರ ಲಭ್ಯವಿರುತ್ತದೆ ಹಾಗು ಇದು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಇದು ಸರ್ಕಾರಿ ಅಧಿಕಾರಿಗಳ ಮತ್ತು ನೌಕರರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಹಾಯವಾಗುವಂತಹ ಕ್ರಮವಾಗಿರುತ್ತದೆ. ಆದರೆ ಇದಕ್ಕೆ ಸಚಿವಲಾಯದ ನೌಕರರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ನೌಕರರು ಈ ಪ್ರಸ್ತಾವನೆಗೆ ಒಪ್ಪಬಾರದು ಎಂದು ಹಾಗು ಒಂದು ವೇಳೆ ಇದಕ್ಕೆ ಒಪ್ಪಿದರೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.

ಸರ್ಕಾರಿ ನೌಕರರು ಕೇವಲ ಸರ್ಕಾರದ ಮತ್ತು ಲೋಕಾಯುಕ್ತದ ಹಂತದಲ್ಲಿ ತಮ್ಮ ಆಸ್ತಿ ವಿವರಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದರೆ, ತಾವು ಭ್ರಷ್ಟಾಚಾರದಲ್ಲಿ ಮುಳುಗಿದ್ದೇವೆ, ಆದ್ದರಿಂದ ತಮ್ಮ ಆಸ್ತಿ ವಿವರವು ಲೋಕಾಯುಕ್ತಕ್ಕೆ ಮುಕ್ತವಾಗಿ ಲಭ್ಯವಾದರೆ, ತಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಈ ರೀತಿಯಾಗಿ ಸರ್ಕಾರವನ್ನೆ ಬ್ಲಾಕ್‍ಮೇಲ್ ಮಾಡಲು ಮುಂದಾಗಿದ್ದಾರೆ. ಸಚಿವಾಲಯ ನೌಕರರ ಈ ನಡೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಬಲವಾಗಿ ವಿರೋಧಿಸುತ್ತದೆ ಮತ್ತು ಸರ್ಕಾರದ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ಪ್ರತಿ ವರ್ಷ ಕಡ್ಡಾಯವಾಗಿ ತಮ್ಮ ಆಸ್ತಿ ವಿವರಗಳನ್ನು ನೇರವಾಗಿ ಲೋಕಾಯುಕ್ತಕ್ಕೆ ಸಲ್ಲಿಸಬೇಕು ಮತ್ತು ಅದು ಸಾರ್ವಜನಿಕರಿಗೂ ಲಭ್ಯವಿರಬೇಕು ಎಂದು ಆಗ್ರಹಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಕಾನೂನಿನಲ್ಲಿ ತಿದ್ದುಪಡಿ ತರಬೇಕೆಂದು ಆಗ್ರಹಿಸುತ್ತದೆ.

ಕೇಂದ್ರ ಸರ್ಕಾರದ ನೌಕರರು ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಲೋಕಪಾಲರಿಗೆ ಪ್ರತಿವರ್ಷ ಸಲ್ಲಿಸಬೇಕೆಂದು ಲೋಕಪಾಲ ಕಾಯ್ದೆಯ ಸೆಕ್ಷನ್ 44 ಹೇಳುತ್ತದೆ. ಕೇಂದ್ರ ಸರ್ಕಾರದ ನೌಕರರಿಗೆ ಮತ್ತು ಅಧಿಕಾರಿಗಳಿಗೆ ಅನ್ವಯವಾಗುವಾಗ, ರಾಜ್ಯ ಸರ್ಕಾರದ ನೌಕರರು ತಮಗೆ ಇಂತಹ ನಿಯಮಗಳು ಇರಬಾರದು ಎಂದು ಹೇಳುವುದು ವಿರೋಧಾಭಾಸದಿಂದ ಕೂಡಿರುವ ನಡವಳಿಕೆಯಾಗಿದೆ. ಮತ್ತೊಂದೆಡೆ, ಕೇಂದ್ರ ಸರ್ಕಾರದ ನೌಕರರಿಗೆ ಸಿಗುವ ಸಂಬಳ ಮತ್ತು ಸವಲತ್ತುಗಳು ಬೇಕು ಎಂದು ಒತ್ತಾಯಿಸುವ ರಾಜ್ಯ ಸರ್ಕಾರದ ನೌಕರರು ಈಗ ಆಸ್ತಿ ವಿವರ ಸಲ್ಲಿಸುವಂತಹ ವ್ಯವಸ್ಥೆ ಇರಬಾರದು ಎಂದು ಹೇಳುತ್ತಿರುವುದು ಅವರುಗಳು ಅಕ್ರಮವಾಗಿ ಸಂಪಾದಿಸಿದ ಆಸ್ತಿ ವಿವರ ಬಹಿರಂಗವಾಗಬಾರದು ಎಂದು.
ಕೆಪಿಎಸ್ಸಿ ಸೇರಿದಂತೆ ಯಾವುದೇ ಸರ್ಕಾರಿ ನೇಮಕಾತಿಗಳನ್ನು ಪಾರದರ್ಶಕವಾಗಿ ನಡೆಸಲು ಎಲ್ಲಾ ಸರ್ಕಾರಗಳು ವಿಫಲವಾಗುತ್ತಿದ್ದು ಸರ್ಕಾರಿ ನೌಕರಿಗಳು ಹಣಕ್ಕೆ ಬಿಕರಿಯಾಗುತ್ತಿವೆ. ಭ್ರಷ್ಟಾಚಾರ ಮಾಡಲೆಂದೇ ಕೆಲವು ಶ್ರೀಮಂತರು ಲಂಚಕೊಟ್ಟು ಸರ್ಕಾರಿ ಕೆಲಸ ಪಡೆದುಕೊಳ್ಳುತ್ತಿರುವ ಇವತ್ತಿನ ಸಂದರ್ಭದಲ್ಲಿ ಸರ್ಕಾರಿ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಹಲವು ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಬೇಕಿವೆ.

ಸರ್ಕಾರಿ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಂಡು ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕಿದ್ದ ಜನಪ್ರತಿನಿಧಿಗಳೂ ಇಂದು ಜನರ ತೆರಿಗೆ ಹಣವನ್ನು ಲೂಟಿ ಮಾಡುವ ಕಾಯಕದಲ್ಲಿ ಮುಳುಗಿರುವುದು ರಾಜ್ಯದ ಜನತೆಯನ್ನು ಇನ್ನಷ್ಟು ಆತಂಕಕ್ಕೀಡುಮಾಡಿದೆ.

ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ನೀಡುವ ಪ್ರಮಾಣಪತ್ರ ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನೆಡಿಸಿದ ಸಂದರ್ಭದಲ್ಲಿ ಅವರ ಆಸ್ತಿ ವಿವರಗಳನ್ನು ಗಮನಿಸಿದಾಗ ದಿನೇದಿನೇ ರಾಜಕಾರಣಿಗಳ ಮತ್ತು ಸರ್ಕಾರಿ ಅಧಿಕಾರಿಗಳ ಆಸ್ತಿಯು ಅನುಮಾನಾಸ್ಪದ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಕಂಡುಬರುತ್ತಿದೆ. ಈ ರೀತಿಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೆಂದೆ ಪ್ರಸ್ತುತ ಇರುವ All India Services (Conduct) Rules, Central Civil Service (Conduct) Rules,Karnataka Civil Service (Conduct) Rules,For all Central and State Employees/Services, *The Lokpal and Lokayukta Act ನಿಯಮಗಳನ್ನು ಕೂಡ ಸಂಬಂಧಪಟ್ಟ ಅಧಿಕಾರಿಗಳು/ನೌಕರರು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ನೋಡಿಕೊಳ್ಳುವ ಮತ್ತು ನಿಯಮಗಳನ್ನು ಉಲ್ಲಂಘಿಸಿದವರನ್ನು ಶಿಕ್ಷಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.

ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದಿಂದ ಅಕ್ರಮ ಆಸ್ತಿ ಗಳಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಸದಸ್ಯರೂ ಸೇರಿದಂತೆ ರಾಜ್ಯದ ಎಲ್ಲಾ ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂಬ ನಿಯಮ ಜಾರಿಯಲ್ಲಿದೆ. ಈ ನಿಯಮವು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೂ ಅನ್ವಯವಾಗುವಂತೆ ಕಾನೂನು ರೂಪಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸುತ್ತದೆ ಮತ್ತು ಈ ವಿವರವು ಸಾರ್ವಜನಿಕ ಪೋರ್ಟಲ್ ಅಲ್ಲಿ ಅಪ್ಲೋಡ್ ಮಾಡುವ ಮತ್ತು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.

ಇಂತಹ ಸಂದರ್ಭದಲ್ಲಿ ಸರ್ಕಾರಿ ನೌಕರರ/ ಅಧಿಕಾರಿಗಳ ಆಸ್ತಿ ಮೇಲೆ ಕಣ್ಣಿಟ್ಟು ಅವರು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವ ಹಕ್ಕು ಸರ್ಕಾರಕ್ಕೆ ತೆರಿಗೆ ಕಟ್ಟುವ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇರುತ್ತದೆ. ಈ ದೃಷ್ಟಿಯಲ್ಲಿ ನೋಡುವುದಾದರೆ ಈಗ ಲೋಕಾಯುಕ್ತ ಅವರ ಸಲಹೆ ಸರಿಯಿದ್ದು, ಅದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಕಾರ್ಯರೂಪಕ್ಕೆ ತರಲು ತಕ್ಷಣವೇ ಕ್ರಮ ವಹಿಸಬೇಕಾಗಿದೆ. ಪ್ರಸ್ತುತ ಸರ್ಕಾರಿ ನೌಕರರು ತಮ್ಮ ಆಸ್ತಿ ವಿವರಗಳನ್ನು ಸರ್ಕಾರಕ್ಕೆ ಪ್ರತಿ ವರ್ಷ ಸಲ್ಲಿಸಬೇಕಾಗಿರುತ್ತದೆ, ಆದರೆ ಇದನ್ನು ಪಾಲಿಸಲಾಗುತ್ತಿದೆಯೆ ಎಂದು ಯಾರಿಗೂ ತಿಳಿದಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಕೇವಲ ಆಸ್ತಿ ವಿವರ ಸಲ್ಲಿಸಿದ್ದಾರೋ ಇಲ್ಲವೋ ಎಂಬ ಮಾಹಿತಿಯನ್ನು ನೀಡಲು ನಿರಾಕರಿಸುವಂತಹ ದುರಾಡಳಿತ ನಮ್ಮ ರಾಜ್ಯದಲ್ಲಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನಾಭಿಪ್ರಾಯ ರೂಪಿಸುವ ಕಾರ್ಯಕ್ರಮಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮುಂದಾಗಲಿದೆ. ಹಾಗೆಯೆ, ಸರ್ಕಾರಿ ನೌಕರರಂತೆ ಲೋಕಾಯುಕ್ತರು ಹಾಗು ಉಪಲೋಕಾಯುಕ್ತರುಗಳು ತಮ್ಮ ಆಸ್ತಿ ವಿವರವನ್ನು ಪ್ರತಿವರ್ಷ ರಾಜ್ಯಪಾಲರಿಗೆ ಸಲ್ಲಿಸಿ, ಲೋಕಾಯುಕ್ತದ ಜಾಲತಾಣದಲ್ಲಿ ಪ್ರಕಟಿಸಿ ಸರ್ಕಾರಿ ನೌಕರರಿಗೆ ಮಾದರಿಯಾಗಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣ ವಿ ಬಿ ಹಾಗೂ ರಘು ನಂದನ ಉಪಸ್ಥಿತರಿದ್ದರು.

Naveen Kumar U

Managing Editor

Related Articles

Leave a Reply

Your email address will not be published. Required fields are marked *

Back to top button