ಸುದ್ದಿ
ವಿಶ್ವ ಮಾನವ ಉದ್ಯಾನವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು
ಮಡಿಕೇರಿ: ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ವಿಶ್ವಮಾನವ ಉದ್ಯಾನವನದಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಹಿರಿಯರು ಸಮಾಜ ಸೇವಕರಾದ ಮಹದೇವಣ್ಣ ರವರು ಧ್ವಜಾರೋಹಣ ನೆರವೇರಿಸಿದರು
ಈ ಸಂದರ್ಭದಲ್ಲಿ ಅಧ್ಯಕ್ಷರಾದ ರವಿಗೌಡ ರವರು ರಾಜ್ಯೋತ್ಸವದ ಶುಭಾಶಯ ಕೋರಿ ರಾಜ್ಯೋತ್ಸವದ ಕುರಿತು ಹಿತನುಡಿಗಳನಾಡಿದ್ದರು ಕಾರ್ಯಕ್ರಮದಲ್ಲಿ ವೇದಿಕೆಯ ತಾಲೂಕು ಉಪಾಧ್ಯಕ್ಷರಾದ ನಾಗೇಶ್. ತಾಲೂಕು ಪ್ರಧಾನ ಕಾರ್ಯದರ್ಶಿ ಅಕ್ಷಿತ್. ನಗರ ಉಪಾಧ್ಯಕ್ಷರಾದ ಲಿಲ್ಲಿಗೌಡ. ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅಭಿಮಾನಿ ಸಂಘದ ಅಧ್ಯಕ್ಷರಾದ ಮುನೀರ್ ಮಾಚರ್ ವೇದಿಕೆಯ ಸದಸ್ಯರುಗಳಾದ ಅಜಿತ್. ದೀಕ್ಷಿತ್. ವಿಜೇಶ್. ಶೇಕ್ ಆದಂ. ರವರುಗಳು ಹಾಜರಿದ್ದರು ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯ ವತಿಯಿಂದ ನೆರೆದಿದ್ದವರಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಣಿಸಲಾಯಿತು.