2024 ಮಡಿಕೇರಿ ದಸರಾಕ್ಕೆ ಕ್ಷಣಗಣನೆ ಇನ್ನೂ ಲೆಕ್ಕಪತ್ರ ಮಂಡನೆ ಮಾಡದ 2023ರ ಸಮಿತಿ -ನುಂಗಣ್ಣರ ಕೈಚಳಕ……..
ಮಡಿಕೇರಿ :ಮಡಿಕೇರಿ ದಸರಾ ತನ್ನದೇ ಆದ ಇತಿಹಾಸ, ಪ್ರಸಿದ್ಧಿ, ಗಾಂಭೀರ್ಯ ಗಳನ್ನು ಹೊಂದಿದ್ದು ಮೈಸೂರು ದಸರಾ ಹೊರತುಪಡಿಸಿದರೆ ಮಡಿಕೇರಿ ದಸರಾಕ್ಕೆ ಮಹೋನ್ನತ ಸ್ಥಾನ ಇದೆ.ಹಿಂದಿನ ದಿನಗಳಲ್ಲಿ ಸಾರ್ವಜನಿಕರ ವಂತಿಕೆಯಿಂದ ದಸರಾ ನಡೆಯತ್ತಿದ್ದು ಅನೇಕ ವರ್ಷಗಳಿಂದ ಸರ್ಕಾರದ ಅನುದಾನದಿಂದ ನಡೆಯುತ್ತಿದೆ.ಕೊಡಗು ಜಿಲ್ಲೆಯಲ್ಲಿ ಇಲಾಖೆಗಳಲ್ಲಿ ಭ್ರಷ್ಟಾಚಾರದ ವರದಿಗಳು ಆಗಾಗ ಪ್ರಕಟವಾಗುತ್ತಿರುವ ಬೆನ್ನಲ್ಲೇ ದಸರಾ ಕಾರ್ಯಕ್ರಮದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಸುದ್ದಿ ಹರಿದಾಡುತ್ತಿದೆ.
ದಿನಾಂಕ 11-10-2023 ರಂದು ಮಡಿಕೇರಿ ನಗರ ದಸರಾ ಸಮಿತಿಯು ಶಾಸಕರ ಉಪಸ್ಥಿತಿಯಲ್ಲಿ ಮಂಡಿಸಿದ 2022 ರ ದಸರಾ ಸಮಿತಿಯ ಖರ್ಚು ವೆಚ್ಚಗಳ ಲೆಕ್ಕಾಚಾರ ಮಡಿಕೇರಿ ನಗರದ ಜನತೆಯನ್ನಲ್ಲದೆ ಪತ್ರಕರ್ತರು ಹಾಗೂ ಸಮಿತಿಯ ಸದಸ್ಯರನ್ನೇ ಬೆರಗುಗೊಳಿಸಿದೆ.
ದಸರಾ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ 9 ದಿನಗಳ ಕಾಲ ಸಭಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯತ್ತದೆ.ದಶ ಮಂಟಪಗಳು ಹಾಗೂ ನಾಲ್ಕು ಕರಗ ದೇವತೆಗಳನ್ನು ಹೊರತು ಪಡಿಸಿದರೆ ಮಿಕ್ಕೆಲ್ಲಾ ಕಾರ್ಯಕ್ರಮ ಗಾಂಧಿ ಮೈದಾನದ ಕಾರ್ಯಕ್ರಮಕ್ಕೆ ಸೀಮಿತವಾಗಿರುತ್ತದೆ.
ದಸರಾ ಮುಖ್ಯ ಸಮಿತಿಯೊಂದಿಗೆ ವಿವಿಧ ಉಪ ಸಮಿತಿಗಳು ಕೈ ಜೊಡಿಸಿ 9 ದಿನಗಳ ಕಾರ್ಯಕ್ರಮವನ್ನು ನಡೆಸುತ್ತದೆ.ದಸರಾ ಕಳೆದ ನಂತರ ಸಮಿತಿ ಲೆಕ್ಕಾಚಾರವನ್ನು ಸಾರ್ವಜನಿಕವಾಗಿ ಮಂಡಿಸುತ್ತಾರೆ.ಇಂತಹ ಸಭೆಯನ್ನು ಸೆಪ್ಟೆಂಬರ್ 11 ರಂದು ನಡೆಸಿ ಲೆಕ್ಕಪತ್ರವನ್ನು ನೀಡಲಾಯಿತು.
ಅಂದು ಸಾರ್ವಜನಿಕವಾಗಿ ಮಂಡಿಸಿದ ಲೆಕ್ಕ ಪತ್ರದಲ್ಲಿ ಪತ್ರಕರ್ತರು ಮತ್ತು ಸದಸ್ಯರಿಗೆ ಊಟೋಪಚಾರದ ವೆಚ್ಚ,ಕಾಫಿ ತಿಂಡಿ ವೆಚ್ಚ, ಸೇರಿದಂತೆ ಒಟ್ಟು ಊಟದ ವೆಚ್ಚವನ್ನು ಮೂರು ಬಿಲ್ಲುಗಳಾಗಿ ಮಾಡಿದ್ದು
166856 ಎಂದು ತೋರಿಸಲಾಗಿತ್ತು.
ಇದಕ್ಕೆ ಸಭೆಯಲ್ಲಿದ್ದ ಸಾರ್ವಜನಿಕರು ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು.ಆದರೆ ಈಗ ಸರ್ಕಾರಕ್ಕೆ ಸಲ್ಲಿಸಿದ ಲೆಕ್ಕಾಚಾರ ಪಟ್ಟಿ ಬಹಿರಂಗವಾಗಿದ್ದು ಅದರಲ್ಲಿ ಊಟೋಪಚಾರದ 5 ಬಿಲ್ಲುಗಳನ್ನು ಮಂಡಿಸಿ ಒಟ್ಟು 3 ಲಕ್ಷದ 38 ಸಾವಿರದ 572ರೂಗಳನ್ನು ತೋರಿಸಲಾಗಿದೆ. ಸಾಂಸ್ಕೃತಿಕ ಸಮಿತಿಯ ವೆಚ್ಚ ಸಾರ್ವಜನಿಕ ಲೆಕ್ಕ ಪತ್ರ ಮಂಡನೆಯಲ್ಲಿ 10 ಲಕ್ಷದ 40 ಸಾವಿರ ಎಂದು ತೋರಿಸಿದರೆ ಅಧಿಕೃತ ವಿವರದಲ್ಲಿ 7 ಲಕ್ಷದ 60 ಸಾವಿರ ರೂಗಳು ಇವೆ.ಅದೇ ರೀತಿಯಲ್ಲಿ ನೆನಪಿನ ಕಾಣಿಕೆ ಎಂದು ಒಂದು ಬಿಲ್ 52 ಸಾವಿರ ರೂ ಗಳಿದ್ದರೆ ಮತ್ತೊಂದು ಬಿಲ್ ನ್ನು ಮೊಮೆಂಟೋ ಎಂದು ನಮೂದಿಸಿ 1 ಲಕ್ಷದ 80 ಸಾವಿರದ 90 ರೂಗಳಲ್ಲಿ ನೀಡಲಾಗಿದೆ.ಹೀಗೆ ಸರ್ಕಾರಕ್ಕೆ ಒಂದು ಲೆಕ್ಕ,ಸಾರ್ವಜನಿಕರಿಗೆ ಇನ್ನೊಂದು ಲೆಕ್ಕ ನೀಡಿರುವುದು ಭ್ರಷ್ಟಾಚಾರ ನಡೆದಿರುವುದನ್ನು ಬೊಟ್ಟು ಮಾಡಿ ತೋರಿಸಿದೆ.
ದಸರಾ ಎಂದರೆ ಅದೊಂದು ಪಾರಂಪರಿಕ ಹಬ್ಬ.ಇದರಲ್ಲಿ ಈ ರೀತಿ ನುಂಗಣ್ಣರ ಕೈಚಳಕ ನಡೆದಿರುವುದು ಮಡಿಕೇರಿ ದಸರಾಕ್ಕೆ ಕಪ್ಪು ಮಸಿ ಬಳಿದಿದೆ.ಇದರಿಂದ ಸೇವಾ ಮನೋಭಾವದಿಂದ
ಸಮಿತಿ ಸದಸ್ಯರಾಗಿ ಈ ಹಿಂದೆ ಕೆಲಸ ಮಾಡಿದವರು ಮತ್ತು ಪ್ರಸ್ತುತ ಕೆಲಸ ಮಾಡುತ್ತಿರುವ ಅನೇಕರು ಮುಜುಗುರಕ್ಕೆ ಒಳಗಾಗಿದ್ದಾರೆ. ಅನಂತರ ಆಡಿಟಿಂಗ್ ಮಾಡಿ ಲೆಕ್ಕಪತ್ರ ಮಂಡನೆ ಸಭೆ ಕರೆಯುವುದಾಗಿ ಹೇಳಿದ 2023ರ ದಸರಾ ಸಮಿತಿ ಆಡಿಟಿಂಗ್ ಇಲ್ಲ ಸಭೆಯು ಇಲ್ಲ
ಇನ್ನೇನು ಮಡಿಕೇರಿ ಐತಿಹಾಸಿಕ ದಸರಕ್ಕೆ ಚಾಲನೆ ಸಿಗಲಿದೆ ಆದರೆ 2023ರ ಲೆಕ್ಕ ಪತ್ರ ಮಾತ್ರ ಸಾರ್ವಜನಿಕವಾಗಿರದೇ ಗೌಪ್ಯವಾಗಿ ಇಡಲಾಗಿದೆ.
ಜ್ವಾನ್ಸನ್ ಕೊಡಗು
ಜಿಲ್ಲಾ ವರದಿಗಾರರು