ಕ್ರೈಂ
ಮಂಗಳೂರು :ವರ್ಕ್ ಶಾಪ್ನಲ್ಲಿ ಕಳವು ಪ್ರಕರಣ ಆರೋಪಿಯ ಬಂಧನ.
ಮಂಗಳೂರು : ಮಂಗಳೂರು ನಗರದ ಮರೋಳಿಯ ಆಟೋ ವರ್ಕ್ ಶಾಪ್ನಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೊನೆಗೂ ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಮಂಗಳೂರು(Mangaluru ) ನಗರದ ಕಣ್ಣೂರು ನಿವಾಸಿ, ರಿಕ್ಷಾ ಚಾಲಕ ನಝೀರ್ ಮುಹಮ್ಮದ್ (26) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 64,500ರೂ. ನಗದು, ದ್ಚಿಚಕ್ರ ವಾಹನ, ಮೊಬೈಲ್, ಹೆಲ್ಮೆಟ್ ವಶಪಡಿಸಿಕೊಳ್ಳಲಾಗಿದೆ. ಸಧ್ಯ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ