ಸುದ್ದಿ

ನನ್ನ ಗಂಡ ನನ್ನ ಜೊತೆ ಸೆ**ಕ್ಸ್ ಮಾಡಿ ಎರಡು ವರ್ಷ ಆಯಿತು, ಎಸ್ ಐ ಪತ್ನಿಯಿಂದ ದೂರು

ಮಹಿಳೆಯೋರ್ವರು, ಕಳೆದ ಎರಡು ವರ್ಷಗಳಿಂದ ತನ್ನೊಂದಿಗೆ ಲೈಂಗಿಕ ಸಂಬಂಧ (sexual relationship) ಹೊಂದಿಲ್ಲ ಎಂದು ಪೊಲೀಸ್ ಗಂಡನ ವಿರುದ್ಧ ಆರೋಪಿಸಿದ್ದು, ತೆಲುಗು ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ನನ್ನಿಬ್ಬರು ಮಕ್ಕಳಿಂದಲೂ ನನ್ನನ್ನು ದೂರವಿಟ್ಟಿದ್ದಾರೆ ಎಂದು ಆರೋಪಿಸಿರುವ ಮಾನಸ ಎಂಬ ಮಹಿಳೆ, ಪತಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿರುವ ಕಾರಣಕ್ಕೆ ನನ್ನನ್ನೂ ದೂರ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಗಂಡನ ವಿರುದ್ಧ ಮಾನಸ ಆರೋಪ ಮಾಡಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ನಿರ್ಲಕ್ಷಿಸಲಾಗುತ್ತಿದೆ (neglected) ಎಂದು ಠಾಣೆಯ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಮಾನಸ ಮತ್ತು ನಾಗರಾಜು ಇಬ್ಬರು ಕರೀಂನಗರ ಜಿಲ್ಲೆಗೆ ಸೇರಿದವರು. ಹತ್ತು ವರ್ಷಗಳ ಹಿಂದೆಯೇ ವಿವಾಹವಾದರು (marriage). ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಆದರೆ ಎರಡು ವರ್ಷಗಳ ಹಿಂದೆ ಎಸ್‌ಐ ನಾಗರಾಜು ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡು ಮಾನಸಾಳಿಗೆ ಕಿರುಕುಳ (harassment) ನೀಡುತ್ತಿದ್ದ. ಅಲ್ಲದೆ, ಪತ್ನಿ ಮತ್ತು ಮಕ್ಕಳನ್ನು ತನ್ನೊಂದಿಗೆ ಇರಿಸಿಕೊಳ್ಳದೇ ಕರೀಂನಗರದಲ್ಲಿ ಇರಿಸಿದ್ದ. ಯಾರಿಗೂ ಅನುಮಾನ ಬರಬಾರದು ಅಂತ ಆಗಾಗ ಕರೀಂನಗರಕ್ಕೆ ಬರುತ್ತಿದ್ದ.

ಈ ನಡುವೆ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ನಾಗರಾಜು ಎರಡನೇ ಮದುವೆಯಾಗಿದ್ದು, ಎರಡು ತಿಂಗಳ ಹಿಂದೆ ಕರೀಂನಗರಕ್ಕೆ ಬಂದು ಮಕ್ಕಳನ್ನು ಬಲವಂತವಾಗಿ (forcible) ಕರೆದೊಯ್ದಿದ್ದಾರೆ ಎಂದು ಮಾನಸ ಆರೋಪಿಸಿದ್ದಾರೆ.

ಇನ್ನೂ ಮಕ್ಕಳು ಎಲ್ಲಿದ್ದಾರೆ ಎಂದು ಹೇಳುತ್ತಿಲ್ಲ. ವಿಚ್ಛೇದನ (divorce) ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾನಸ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Naveen Kumar

Managing Editor

Related Articles

Leave a Reply

Your email address will not be published. Required fields are marked *

Back to top button