ಕ್ರೈಂ
ದಕ್ಷಿಣಕನ್ನಡದ ಕಿನ್ನಿಗೋಳಿಎಂಬಲ್ಲಿ : ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಕಿನ್ನಿಗೋಳಿ: ಇಲ್ಲಿನ ಐಕಳ ನೆಲ್ಲಿಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಕರ್ನಾಟಕದ ಬಾದಾಮಿ ಕೆರೂರು ಗುಬೇರಕೊಪ್ಪ ಮೂಲದ ಸುನೀತಾ (31) ರವಿವಾರ ಮಧ್ಯಾಹ್ನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ರವಿವಾರ ಮಧ್ಯಾಹ್ನದ ವರೆಗೆ ಮನೆಯಲ್ಲಿ ಇದ್ದ ಸುನೀತಾ ಬಳಿಕ ನಾಪತ್ತೆಯಾಗಿದ್ದರು. ಸ್ಥಳೀಯರು ಪರಿಸರದಲ್ಲಿ ಹುಡುಕಾಡಿದರೂ ಸುಳಿವು ಪತ್ತೆಯಾಗಿರಲಿಲ್ಲ. ಬಳಿಕ ಬಾಡಿಗೆ ಮನೆಯ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.ಅಗ್ನಿಶಾಮಕ ದಳದ ಸಿಬಂದಿ ಮೃತ ದೇಹವನ್ನು ಮೇಲಕ್ಕೆ ಎತ್ತಿದರು. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.