ಕ್ರೈಸ್ತ ಪ್ರಭೋದಕರಾದ ಬ್ರದರ್ ಟಿ ಕೆ ಜಾರ್ಜ್ ನಿಧನ
ಯೇಸು ಸ್ಪರ್ಶ ತಂಡದ ಸದಸ್ಯರು, ಕ್ರೈಸ್ತ ಧರ್ಮ ಪ್ರಭೋಧಕರೂ ಆದ ಬ್ರದರ್ ಟಿ ಕೆ ಜಾರ್ಜ್ ರವರು ಕೊನೆಯುಸಿರೆಳೆದಿದ್ದಾರೆ, ಇವರು ಸುಮಾರು 77 ದಿನಗಳಿಂದ ಅನಾರೋಗ್ಯದಿಂದ ಸಂತ ಜಾನರ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದರು. ಇಂದು ಚಿಕೆತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ ಎಂದು ಅವರ ಆತ್ಮೀಯರಾದ ಫಾದರ್ ಫ್ರಾಂಕ್ಲಿನ್ ಡಿಸೋಜಾ ರವರು ತಿಳಿಸಿದ್ದಾರೆ.
ಇವರಿಗೆ 69 ವರ್ಷ ವಯಸ್ಸಾಗಿತ್ತು. ಇವರ ಪಾರ್ಥಿವ ಶರೀರವು ಸದ್ಯ ಸಂತ ಜಾನರ ಆಸ್ಪತ್ರೆಯಲ್ಲಿ ಇದ್ದು, ಮೂಲಗಳ ಪ್ರಕಾರ ಅವರ ಸ್ವಗ್ರಾಮವಾದ ಶಿವಮೊಗ್ಗದ ಭದ್ರಾವತಿಯಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯುತ್ತವೆ
ಇವರ ಕೊಡುಗೆ ಕ್ರೈಸ್ತ ಹಾಗೂ ಕನ್ನಡ ಕ್ರೈಸ್ತ ಬಳಗಕ್ಕೆ ಅಪಾರವಾದದ್ದು, ಇವರು ಸುಮಾರು 33 ವರ್ಷಗಳ ಕಾಲ ಕ್ರೈಸ್ತ ಪ್ರೊಭೋದಕರಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಅನೇಕ ಕನ್ನಡ ಕ್ರೈಸ್ತ ಗೀತೆಗಳನ್ನು ರಚಿಸಿದ್ದಾರೆ. ಅನೇಕ ಕನ್ನಡ ಹಾಡುಗಳ ಸಿಡಿ ಗಳನ್ನು ಬಿಡುಗಡೆ ಮಾಡಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಕ್ರಿಸ್ತನ ಸುವಾರ್ತೆಯನ್ನು ಸಾರಿದ್ದಾರೆ. ಹಾಗೆಯೇ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಂತರ ಕ್ರಿಸ್ತನ ಕರೆಗೆ ಓಗೊಟ್ಟು ಕ್ರಿಸ್ತನ ಕೆಲಸಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಇವರ ಅಗಲಿಕೆ ಕನ್ನಡ ಕ್ರೈಸ್ತ ಬಳಗಕ್ಕೆ ದುಃಖ ಹಾಗೂ ಆಘಾತ ಉಂಟುಮಾಡಿದೆ.