ಸುದ್ದಿ

ಕೊಡ್ಲಿಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ 78ನೇ ಸ್ವಾತಂತ್ರ್ಯ ದಿನಾಚರಣೆ

ಕೊಡಗು:ಕೊಡ್ಲಿಪೇಟೆ ಶಾಲೆಯಲ್ಲಿ ಅದ್ದೂರಿಯಾಗಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು . ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಆಶಾರವರು ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.ಎಸ್‌ ಡಿ ಎಂ ಸಿ ಅಧ್ಯಕ್ಷರಾದ ವಸಂತ್ ಜೈನ್ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಶುಭ ಕೋರಿದರು
ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಅರ್ಥಪೂರ್ಣ ವಾಗಿ ಮೆರವಣಿಗೆ ಸಾಗಿ ನಂತರ ಶಾಲೆಯ ಸಭಾಂಗಣದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಸಂತ್ ಅವರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಮಾಜಿ ಯೋಧ ಅನಿಲ್ ಅವರನ್ನು ಶಾಲು ಹೊದಿಸಿ ಗೌರವಿಸಿದರು.

ನಂತರ ಮಾತನಾಡಿದ ಅವರು ತಾವು ದೇಶಕ್ಕಾಗಿ ಸೇವೆ ಮಾಡಿದ ಬಗ್ಗೆ ಹಂಚಿಕೊಂಡರು ನಂತರ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಿದ ಬ್ಯಾಡಗೊಟ್ಟ ಗ್ರಾಮದ ನಿವಾಸಿ ಮೊಯ್ದೀನ್ ಅವರುಗಳನ್ನ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಎಲ್ ಕೆ ಜಿ ಮತ್ತು ಯು ಕೆ ಜಿ ಸಮಿತಿಯ ಅಧ್ಯಕ್ಷರಾದ ಕೆಂಚೇಶ್ವರ್, ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಭಗವಾನ್ ,ನಿಕಟ ಪೂರ್ವ ಹಾಗೂ ಕಡ್ಡಾಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಇಂದ್ರೇಶ್ ,ಪತ್ರ ಕರ್ತರಾದ ಫ್ರೆಡ್ಡಿ ,ರಘು,ಕೊಡ್ಲಿಪೇಟೆ ವಲಯ ಸಂಪನ್ಮೂಲ ವ್ಯಕ್ತಿ ರವೀಶ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಸದಸ್ಯರಾದ ಹನೀಫ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಆಶಾ ಹಾಗೂ ಸಹ ಶಿಕ್ಷಕಿಯರು ಸಿಬ್ಬಂದಿಗಳು ಮತ್ತು ಭೋಜನ ಸಿಬ್ಬಂದಿಗಳು ಪೋಷಕರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಚಿತ್ರಕಲಾ ನಿರೂಪಿಸಿದರು ಮುಖ್ಯ ಶಿಕ್ಷಕಿ ಶ್ರೀಮತಿ ಆಶಾ ಸ್ವಾಗತ ಕೋರಿದರು ಮತ್ತು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಿದರು

ವರದಿ: ಫ್ರೆಡ್ಡಿ ಪಿ.ಸಿ

Johnson J

Johnson Reporter Kodagu

Related Articles

Leave a Reply

Your email address will not be published. Required fields are marked *

Back to top button