ಕೊಡಗು: ವಿಶ್ವಮಾನವ ಉದ್ಯಾನವನದಲ್ಲಿ ಸ್ವಾತಂತ್ರ್ಯ ದಿನ ಆಚರಣೆ?
ಮಡಿಕೇರಿ: ಕೊಡಗು ಹಿತರಕ್ಷಣಾ ವೇದಿಕೆ ಹಾಗೂ ಕೊಡಗು ಜಿಲ್ಲಾ ವಿಷ್ಣು ಸೇನಾ ಸಮಿತಿ ವತಿಯಿಂದ ಮಡಿಕೇರಿ ನಗರದ ವಿಶ್ವಮಾನವ ಉದ್ಯಾನವನದಲ್ಲಿ 78ನೇ ಸ್ವತಂತ್ರೋತ್ಸವವನ್ನು ಆಚರಿಸಲಾಯಿತು ಅತಿಥಿಗಳಾಗಿ ಆಗಮಿಸಿದ ಮಾಜಿ ಪುರಸಭೆ ಉಪಾದ್ಯಕ್ಷರು ಹಾಗೂ ಸಮಾಜಸೇವಕರಾದ ಟಿ.ಎಮ್ ಅಯ್ಯಪ್ಪರವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮತೋರ್ವ ಅತಿಥಿಗಳಾದ ಶ್ರೀ ಯೂಸುಫ್ ಖಾನ್ NCIB FORCE ASSISTANT DIRECTOR ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸಿದರು, ಈ ಸಂದರ್ಭದಲ್ಲಿ ಅತಿಥಿ ಗಣ್ಯರುಗಳಾದ, ತೆನ್ನಿರಾಮೈನಾ, ಕಲೀಲ್ ಬಾಷಾ ಅವರು ಸ್ವತಂತ್ರ ಸಂಗ್ರಾಮ ಹಾಗೂ ಸ್ವತಂತ್ರ ದಿನದ ಬಗ್ಗೆ ಮಾಹಿತಿ ನೀಡಿ ನೆರೆದಿದ್ದವರಿಗೆ ಶುಭ ಕೋರಿದರು ಈ ಕಾರ್ಯಕ್ರಮದಲ್ಲಿ ಕೊಡಗು ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ರವಿಗೌಡ ವಿಷ್ಣುಸೇನಾ ಸಮಿತಿಯ ಜಿಲ್ಲಾಧ್ಯಕ್ಷರಾದ ರಫೀಕ್ ದಾದಾ. ಕೊಡಗು ಹಿತರಕ್ಷಣಾ ವೇದಿಕೆಯ ತಾಲೂಕು ಉಪಾಧ್ಯಕ್ಷರಾದ ನಾಗೇಶ್ . ಮಹಿಳಾ ತಾಲೂಕು ಅಧ್ಯಕ್ಷರಾದ ಕವಿತಾ ಪ್ರಸಾದ್. ತಾಲೂಕು ಕಾರ್ಯದರ್ಶಿಗಳಾದ ಅಕ್ಷಿತ್. ನಿರ್ದೇಶಕಿ ಲಿಲ್ಲಿಗೌಡ. ಕಾರ್ಮಿಕ ಘಟಕದ ಅಧ್ಯಕ್ಷೆ ದಿವ್ಯ. ಹ್ಯೂಮನ್ ರೈಟ್ಸ್ ಪ್ರೋಟೆಕ್ಷನ್ ಕಮಿಷನ್ ಕೊಡಗು ಡೈರೆಕ್ಟರ್ ರ್ಜಾನ್ಸನ್ ಪ್ರವೀಣ ವಿಷ್ಣುಸೇನಾ ಸಮಿತಿಯ ಪ್ರಧಾನ ಕಾರ್ಯದರ್ಶಿನಾಗರಾಜ್. ಖಜಾಂಚಿ ಆನ್ಸರ್. ಕಾರ್ಯದರ್ಶಿ ಪ್ರವೀಣ್ ಕೊಡಗು ಹಿತರಕ್ಷಣಾ ವೇದಿಕೆ ಸದಸ್ಯರುಗಳಾದ ಪುನೀತ್. ಹರ್ಷಿತ್. ರೂಪ.ಸೈಮನ್. ಅಜಿತ್.ವಿಜೇಶ್.ಮಹದೇವ್. ಆಕಾಶ್. ಶರಣ್. ಸೂರ್ಯ. ವಿಷ್ಣು ಸೇನಾ ಸಮಿತಿಯ ಸದಸ್ಯರುಗಳು ಹಾಗೂ ಹಿತರಕ್ಷಣಾ ವೇದಿಕೆಯ ಸದಸ್ಯರುಗಳು ಸಾರ್ವಜನಿಕರು ಹಾಜರಿದ್ದರು.
ಜಿಲ್ಲಾ ವರದಿಗಾರರು
ಜ್ವಾನ್ಸನ್ ಕೊಡಗು