ಕೊಡಗು: ಕ್ಯಾಂಪಸ್ ವಿಂಗ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಕೊಡ್ಲಿಪೇಟೆ: ಎಸ್.ಕೆ.ಎಸ್.ಎಸ್.ಎಫ್ ಕೊಡ್ಲಿಪೇಟೆ ಶಾಖೆಯ ವತಿಯಿಂದ ಕ್ಯಾಂಪಸ್ ವಿಂಗ್ ಶಾಖಾ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಹ್ಯಾಂಡ್-ಪೋಸ್ಟ್ ನಲ್ಲಿರುವ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಸದಸ್ಯತ್ವ ಅಭಿಯಾನವನ್ನು ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಕೋಶಾಧಿಕಾರಿ ಬಾಸಿತ್ ಹಾಜಿ ಹಾಗೂ ಶಾಖಾಧ್ಯಕ್ಷರಾದ ಝಹೀರ್ ನಿಝಾಮಿ ಉದ್ಘಾಟಿಸಿದರು. ಎಂಟನೇ ತರಗತಿ ವಿದ್ಯಾರ್ಥಿಗಳಿಂದ ಪಿಯುಸಿ, ಪದವಿ, ಸ್ನಾತಕೋತ್ತರ, ವೃತ್ತಿಪರ, ಸರ್ಟಿಫಿಕೇಟ್ ಕೋರ್ಸ್, ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮತ್ತು ವಿದೇಶಗಳಲ್ಲಿ ಹಾಗೂ ಹೊರ ರಾಜ್ಯದಲ್ಲೂ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಅಭಿಯಾನದಲ್ಲಿ ನೋಂದಣಿ ಮಾಡಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ, ಎಸ್.ಕೆ.ಎಸ್.ಎಸ್.ಎಫ್ ಸಹ ಕಾರ್ಯದರ್ಶಿಗಳಾದ ಸಬ್ಬಿ ಮುಸ್ತಫಾ, ಹ್ಯಾರಿಸ್, ಕ್ಯಾಂಪಸ್ ವಿಂಗ್ ಉಸ್ತುವಾರಿ ಸೈಫುದ್ದೀನ್, ವಿಖಾಯ ಉಸ್ತುವಾರಿ ಶರೀಫ್ ಜಿ.ಎಂ, ಸಮಿತಿಯ ಸದಸ್ಯರಾದ ರಿಯಾಝ್, ಶರೀಫ್ ಡಿ. ಎ, ಸಲ್ಮಾನ್ ಹಾಗೂ ಇತರೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಫ್ರೆಡ್ಡಿ ಪಿಸಿ
ವರದಿಗಾರರು