ಕೊಡಗು: ಕೊಡ್ಲಿಪೇಟೆಯಲ್ಲಿ ಅದ್ಧೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಕೊಡ್ಲಿಪೇಟೆ:ಕೂರ್ಗ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯ ಪ್ರಶಸ್ತಿ ವಿಜೇತ ಪ್ರಸಿದ್ಧ ಶಿಲ್ಪಿಗಳಾದ ವರಪ್ರಸಾದ್ ಕೊಡ್ಲಿಪೇಟೆ ಅವರು ಅನ್ಯ ಭಾಷೆಯ ಅಭಿಮಾನ ಇರಲಿ , ಕನ್ನಡ ಭಾಷೆಯ ಸ್ವಾಭಿಮಾನ ಇರಲಿ ನಮ್ಮ ಮಾತೃಭಾಷೆಯಲ್ಲಿ ಮಾತನಾಡುವುದನ್ನು ಮರೆಯಬೇಡಿ ಎಂದು ಹೇಳಿದರು,
ಆಟೋ ಚಾಲಕರು ತಮ್ಮ ಆಟೋಗಳಿಗೆ ಕನ್ನಡ ಬಾವುಟ ಹರಿಸಿ ಹೂವುಗಳಿಂದ ಅಲಂಕರಿಸಿದ್ದರು ಬೆಳಗ್ಗೆ ಅಟೋ ನಿಲ್ದಾಣದಲ್ಲಿ ಮುಖ್ಯ ಅತಿಥಿಗಳ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಶನಿವಾರಸಂತೆ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗೋವಿಂದ್ ರಾಜ್ ಅವರು ದ್ವಜ ಆರೋಹಣ ಮಾಡುವ ಮೂಲಕ ಅದ್ಧೂರಿಯಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು, ನಂತರ ಮಾತನಾಡಿದ ಅವರು ಕನ್ನಡ ನಡೆ ನುಡಿ ಬಗ್ಗೆ ನನಗೆ ಅಭಿಮಾನ ಇದೆ ಎಲ್ಲೇ ಹೋದರೂ ಬೇರೆ ಭಾಷೆಗಳು ಗೊತ್ತಿದ್ದರೂ ಕನ್ನಡದಲ್ಲೇ ಮಾತನಾಡುತ್ತೇನೆ ಮತ್ತು ಪೋಲೀಸ್ ಠಾಣೆಯಲ್ಲಿ ಆದರೂ ಸಹ ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ತಮ್ಮ ಅನುಭವ ಹಂಚಿಕೊಂಡರು, ನಂತರ ಮಾತನಾಡಿದ ಮಾದ್ಯಮ ವರದಿಗಾರರಾದ ಪಾಸ್ಟರ್. ಫ್ರೆಡ್ಡಿ ಅವರು ನಮ್ಮ ಪಟ್ಟಣದಲ್ಲಿ ಬೇರೆ ಬೇರೆ ಭಾಷೆಗಳ ಮಾತನಾಡುವ ಅನೇಕರಿದ್ದಾರೆ ನಾವುಗಳು ಅವರ ಭಾಷೆ ಕಲಿತು ವ್ಯವಾಹರಿಸದೆ ನಮ್ಮ ಮಾತೃಭಾಷೆಯಲ್ಲೇ ಅವರ ಜೊತೆ ವ್ಯವಹಾರ ನಡೆಸುವುದಾದರೆ ಅನ್ಯ ಭಾಷೆಯ ಜನಗಳು ಸಹ ನಮ್ಮ ಕನ್ನಡ ಬಾಷೆ ಬೇಗ ಕಲಿಯುತ್ತಾರೆ ಎಂದು ತಿಳಿಸಿದರು,
ಅಟೋ ಚಾಲಕರು ಅಲಂಕರಿಸಿದ ತಮ್ಮ ಎಲ್ಲಾ ಆಟೋಗಳು ಪಟ್ಟಣ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು .
ಮದ್ಯಾಹ್ನ ಕೂರ್ಗ್ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ವಿಜಯ್ ಅವರ ಅಧ್ಯಕ್ಷತೆಯಲ್ಲಿ ಅಥಿತಿಗಳಾಗಿ ಆಗಮಿಸಿದ ಕೊಡ್ಲಿಪೇಟೆಯ ನೆಚ್ಚಿನ ನಾಯಕರಾದ ಕೆ ಆರ್ ಚಂದ್ರ ಶೇಖರ್,
ಜಾಕೀರ್ ಹುಸೈನ್,ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಆಶಾ, ಪತ್ರಕರ್ತರಾದ ಫ್ರೆಡ್ಡಿ ಇವರುಗಳು ಜ್ಯೋತಿ ಬೆಳಗುವ ಮೂಲಕ ಶಾಲಾ ಮಕ್ಕಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಕೊಡ್ಲಿಪೇಟೆ ವಲಯದ 8 ಶಾಲೆಗಳ ವಿದ್ಯಾರ್ಥಿಗಳು ತಮ್ಮ ಅಭೂತ ಪೂರ್ವ ಪ್ರತಿಭೆಗಳನ್ನು ಹೊರಚೆಲ್ಲಿ ತೀರ್ಪುಗಾರರಿಗೆ ತೀರ್ಪು ನೀಡಲು ಅಸಾಧ್ಯ ಆಗುವ ರೀತಿಯಲ್ಲಿ ಉತ್ತಮ ನೃತ್ಯ ಪ್ರದರ್ಶಿಸಿದರು ಪ್ರೈಮರಿ, ಪ್ರೌಢ ಶಾಲೆ ಹಾಗೂ ಕಾಲೇಜ್ ಮಟ್ಟದಲ್ಲಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಮೊರಾರ್ಜಿ ಶಾಲೆ ಕ್ಯಾತೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ, ಪ್ರೌಢ ಶಾಲಾ ಮಟ್ಟದಲ್ಲಿ ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಮತ್ತು ಪ್ರೈಮರಿ ಮಟ್ಟದಲ್ಲಿ ಕೊಡ್ಲಿಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ದ್ವಿತೀಯ ಸ್ಥಾನ ಪಡೆದು ಸಂತೋಷ ವ್ಯಕ್ತ ಪಡಿಸಿದ್ದಾರೆ,ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ನೆನಪಿನ ಕಾಣಿಕೆ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ ಆರ್ ಚಂದ್ರ ಶೇಖರ್, ಪ್ರಸಿದ್ಧ ಶಿಲ್ಪಿ ವರ ಪ್ರಸಾದ್, ಜಿ ಎಲ್ ಜನಾರ್ಧನ್, ಔರಂಗಜೇಬ್ , ಉದ್ಯಮಿ ಯತೀಶ್,ಮಧುಕುಮಾರ್ ,ದಿನೇಶ್, ನಾಗೇಶ್, ಫೈಝನ್ ,ಕೆ ಸಿ,, ಪ್ರಸನ್ನ, ಅಟೋ ಚಾಲಕರ ಸಂಘದ ಅಧ್ಯಕ್ಷ ವಿಜಯ್ ಕಾರ್ಯದರ್ಶಿ ಶಂಸು ಇತರರ ಸಮ್ಮುಖದಲ್ಲಿ ಮೊರಾರ್ಜಿ ಶಾಲೆಯ ವಿದ್ಯಾರ್ಥಿನಿಯರು ಕುಂಚ ಗಾಯನ ಹಾಡುವಾಗ ಮೊರಾರ್ಜಿ ಶಾಲೆಯ ವಿದ್ಯಾರ್ಥಿನಿಯು ಕರ್ನಾಟಕ ರಾಜ್ಯದ ನಕ್ಷೆ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಅದ್ಧೂರಿ ನೀಡಲಾಯಿತು ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದವರು ಹಾಗೂ ಸಂಘದ ಅಧ್ಯಕ್ಷರಾದ ವಿಜಯ್ ಅವರು ರಾಜ್ಯೋತ್ಸವದ ಬಗ್ಗೆ ಚುಟುಕವಾಗಿ ಮಾತನಾಡಿದರು, ಸಾಂಸ್ಕೃತಿಕ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ವೈಟ್ ಲಿಫ್ಟಿಂಗ್ ನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಕುಮಾರಿ ಅಮೃತ.ಸ್.ಆರ್,ಹಾಗೂ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟಕ್ಕೆ ಆಯ್ಕೆ ಆದ ಕೊಡ್ಲಿಪೇಟೆಯ ವಿದ್ಯಾರ್ಥಿ, ಕೆ ಯು ಹರ್ಶಿತ್, ಮಾದ್ಯಮ ವರದಿಗಾರಾರದ ಫ್ರೆಡ್ಡಿ, ಹನೀಫ್, ಹೆಚ್ ಮ್ ರಘು, ತೀರ್ಪುಗಾರರಾಗಿ ಭಾಗವಹಿಸಿದ ಫ್ರೆಡ್ಡಿ, ಧರ್ಮ , ಜಾಕೀರ್ ಹುಸೈನ್, ಮುಜಾಮಿಲ್ ಇವರುಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಮಾತ್ರವಲ್ಲದೆ ಅತಿಥಿಗಳಾಗಿ ಆಗಮಿಸಿದ ಎಲ್ಲಾ ಅಥಿತಿಗಳಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು, ನಂತರ ಭದ್ರಾವತಿ ಬ್ರದರ್ಸ್ ಆರ್ಕೆಸ್ಟ್ರಾ ತಂಡದಿಂದ ಗಾಯನ, ನೃತ್ಯ ಪ್ರದರ್ಶಿಸಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರಿಗೆ ಮನರಂಜನೆ ನೀಡಿದರು, ಕಾರ್ಯಕ್ರಮವನ್ನು ಶಿಕ್ಷಕರಾದ ಸತೀಶ್ ಅವರು ನಿರೂಪಣೆ, ಜಾಕೀರ್ ಹುಸೈನ್ ಸ್ವಾಗತವನ್ನು ಆಟೋ ಚಾಲಕರ ಸಂಘದ ಅಧ್ಯಕ್ಷರಾದ ವಿಜಯ್ ವಂದನಾರ್ಪಣೆ ಸಲ್ಲಿಸಿದರು ಎಲ್ಲಾ ಆಟೋ ಚಾಲಕರು ಹಾಗೂ ಮಾಲೀಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.