ಅವಾಚ್ಯ ಪದಗಳಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಿಂದನೆ ಸಿ.ಟಿ ರವಿ ನಡೆ ವಿರುದ್ದ ಉಳ್ಳಿ ದರ್ಶನ್ ಆಕ್ರೋಶ .!
***ಶಿಕಾರಿಪುರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಉಳ್ಳಿ ದರ್ಶನ್ ರವರು, ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದ ಸಂಧರ್ಭದಲ್ಲಿ ವಿಧಾನಪರಿಷತ್ ಕಲಾಪದ ವೇಳೆ ಮಾನ್ಯ ಗೌರವಾನ್ವಿತ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರವರ ವಿರುದ್ದ ಅಸಭ್ಯವಾಗಿ ಕೀಳು ಮಟ್ಟದ ಹೇಳಿಕೆ ನೀಡುವ ಮೂಲಕ ತಮ್ಮ ಕೊಳಕು ಮನಸ್ಥಿತಿಯನ್ನು ಸಿ.ಟಿ ರವಿ ಹೊರಹಾಕಿದ್ದು, ಇದು ಬಿಜೆಪಿಯ ಸಂಸ್ಕೃತಿಯ ಕೈಗನ್ನಡಿಯಾಗಿದೆ.**ಓತಿಕ್ಯಾತಕ್ಕೆ ಬೇಲಿ ಸಾಕ್ಷಿ ಅನ್ನೊಹಾಗೆ ಬಿಜೆಪಿ ರಾಜ್ಯಾದ್ಯಕ್ಷ ಹಾಗು ಶಿಕಾರಿಪುರದ ಶಾಸಕ ವಿಜೇಂದ್ರ ಕೂಡ ಸಿ.ಟಿ ರವಿಗೆ ಬೆಂಬಲಿಸುತ್ತಿರುವುದು ಖಂಡನೀಯ, ರಾಜ್ಯದ ಒಬ್ಬ ಮಹಿಳೆಯ ಬಗ್ಗೆ ಬಿಜೆಪಿಯ ಈ ನಡೆ ಮನುಕುಲವೇ ತಲೆ ತಗ್ಗಿಸುವಂತಿದೆ.**ಶಿವಮೊಗ್ಗದ ಸಂಸದರು ಹಾಗು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ನಿರ್ದೇಶಕರಾದ ಬಿ.ವೈ.ರಾಘವೇಂದ್ರ ರವರು ಕೂಡ ಓ.ಟಿ ರವಿಯನ್ನು ಓಲೈಸದೆ ಇದನ್ನು ಖಂಡಿಸಿ ಸಮಾಜದ ಒಬ್ಬ ಹೆಣ್ಣು ಮಗಳ ಪರ ನಿಲ್ಲಬೇಕಾಗಿ ಆಗ್ರಹಿಸಿದರು.**ಬಿಜೆಪಿ ಪಕ್ಷದವರು, ಭಾರತಾಂಬೆ, ಕನ್ನಡಾಂಬೆಯ ಬಗ್ಗೆ ನಕಲಿ ಭಾಷಣ ಮಾಡುವುದನ್ನು ಬಿಟ್ಟು ಕನ್ನಡ ನೆಲದ ಒಬ್ಬ ಹೆಣ್ಣು ಮಗಳಿಗೆ ಅನ್ಯಾಯವಾಗಿರುವುದನ್ನು ಖಂಡಿಸಬೇಕು.**ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಜವಾದ್ದಾರಿಯುತ್ತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ #ಗೃಹ_ಲಕ್ಷ್ಮೀ ಯೋಜನೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದನ್ನು ಸಹಿಸಲಾಗದೆ ಅವರ ವಿರುದ್ದ ಕೀಳು ಮಟ್ಟದ ಹೇಳಿಕೆ ನೀಡಿದ್ದು, ರಾಜ್ಯದ ಜನ ಮೂರು ಉಪಚುನಾವಣೆಗಳಲ್ಲಿ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿದ್ದಾರೆ, ಈ ಕೂಡಲೆ ಸಿ.ಟಿ.ರವಿ ಸಚಿವರಿಗೆ ಕ್ಷಮೆಯಾಚಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.**ಇದೇ ಸಂಧರ್ಭದಲ್ಲಿ ಮಾತನಾಡಿದ ಪುರಸಭಾ ಸದಸ್ಯರಾದ ಜಯಶ್ರೀ ಹೇಮರಾಜ್ ರವರು, ನಾನು ಒಬ್ಬ ಹೆಣ್ಣು ಮಗಳಾಗಿ ಹೇಳುವುದಾದರೆ ಸಿ.ಟಿ.ರವಿಯವರಿಗೆ ಜನ್ಮ ನೀಡಿದವಳು ಸಹ ಒಂದು ಹೆಣ್ಣು (ಮಹಿಳೆ), ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ, ಇದು ಖಂಡನೀಯ ಕೂಡಲೆ ಕ್ಷಮೆ ಕೇಳಬೇಕು ಎಂದರು.**ಈ ವೇಳೆ ಪುರಸಭಾ ಸದಸ್ಯರಾದ ಶ್ರೀಧರ್ ಕರ್ಕಿ, ನಗರದ ರವಿಕಿರಣ್, ವಿಜಯ್ ಕುಮಾರ್, ರೇಣುಕಸ್ವಾಮಿ, ಶರತ್ ಮುಂತಾದವರು ಪಾಲ್ಗೊಂಡಿದ್ದರು.*